   ಮೂಲದೊಡನೆ ಪರಿಶೀಲಿಸಿ

	ಕೋರಿಯೋಲಿಸ್ ಪರಿಣಾಮಗಳು

ಭೂಮಿಯಿಂದ ಎತ್ತರದಲ್ಲಿ ಸ್ಥಿರ ಆಕಾಶವೇಗದಿಂದ ಚಲಿಸುತ್ತಿರುವ ಯಾವುದೇ ಆಕಾಶಕಾಯ ಆವರ್ತಿಸುತ್ತಿರುವ ಭೂಮಿಯ ಮೈಯನ್ನು ಕುರಿತು ವಿಚಲಿತವಾಗುತ್ತದೆ.  ಈ ವಿಚಲನೆಯನ್ನು ಮೊದಲಿಗೆ ಅಭ್ಯಾಸ ಮಾಡಿದವ ಫ್ರೆಂಚ್ ವಿಜಾÐನಿ ಗ್ಯಾಸ್ಟರ್ಡ್‍ಡ ಕೋರಿಯೋಲಿಸ್ ಆದ್ದರಿಂದ ಇದರ ಪರಿಣಾಮಗಳಿಗೆ ಆತನ ಹೆರನ್ನೇ ನೀಡಲಾಗಿದೆ ವೃತ್ತ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಕಣದ ಗತಿ ವಿಜಾÐನವನ್ನು ಅಧ್ಯಯಿಸುವಾಗ mv2/ಡಿ ಎಂಬ ಕೇಂದ್ರಾಪಗಮನ ಬಲವನ್ನು ಅದರ ಮೇಲೆ ಪ್ರಯುಕ್ತಿಸುವುದು ಸರಿಯಷ್ಟೆ. (m ಆ ಕಣದ ದ್ರವ್ಯರಾಶಿ, v ಅದರ ವೇಗ, ಡಿ ಕಕ್ಷೆಯ ತ್ರಿಜ್ಯ).  ಇದು ಒಂದು ಕಾಲ್ಪನಿಕ ಬಲ.  ಕೋರಿಯೋಲಿಸ್ ಬಲ ಸಹ ಇಂಥ ಒಂದು ಕಾಲ್ಪನಿಕ ಬಲ; ಗತಿ ವಿಜಾÐನದ ಸಮೀಕರಣಗಳ ಸಮತೋಲನದಲ್ಲಿ ಎದುರಾಗುವ ಒಂದು ಪರಿಕಲ್ಪನೆ.

ಭೂಮಿಯ ದೈನಂದಿನ ಆವರ್ತನೆ ಭೂಮಿಯ ಮೇಲೆ ಅಥವಾ ಆಕಾಶದಲ್ಲಿ ಚಲಿಸುತ್ತಿರುವ ವಸ್ತುಗಳ ಪಥದ ಮೇಲೂ ಪರಿಣಾಮವನ್ನುಂಟು  ಮಾಡುತ್ತದೆ. ಉದಾಹರಣೆಗೆ ಉತ್ತರ ಮೇರುವಿನಿಂದ ಒಂದು ರಾಕೆಟನ್ನು ಮೈಸೂರಿನತ್ತ ಉಡಾಯಿಸಲಾಗಿದೆ ಎಂದು ಭಾವಿಸೋಣ.  ಅದರ ಚಲನ ದರ ಸೆಕೆಂಡಿಗೆ 1 ಮೈಲಿ ಆಗಿದ್ದರೆ ಅದು ಮೈಸೂರಿನ ಅಕ್ಷಾಂಶವನ್ನು (12.50) ತಲಪುವುದರಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುಮಾರು 22.50 ಯಷ್ಟು ಆವರ್ತಿಸಿರುವುದರಿಂದ ರಾಕೆಟ್ ಮೈಸೂರಿಗೆ ಬದಲು ಅದರ ಪಶ್ಚಿಮಕ್ಕೆ ಸುಮಾರು 1,500 ಮೈಲಿ ದೂರದಲ್ಲಿ ಎಂದರೆ ಅರೇಬಿಯ ಸಮುದ್ರದಲ್ಲಿರುವ ಸೋಕೋತ್ರ ಎಂಬ ದ್ವೀಪವನ್ನು ತಲುಪುತ್ತದೆ.  ನೆಲದಿಂದ ನೋಡಿದವರಿಗೆ ರಾಕೆಟ್‍ನ ಪಥ ಒಂದು ಸರಳರೇಖೆಯಾಗಿರದೆ ತನ್ನ ಪಥದಲ್ಲಿ ಅದು ಬಲಭಾಗಕ್ಕೆ ತಳ್ಳಲ್ಪಡುತ್ತಿದೆಯೋ ಎಂದು ಭಾಸವಾಗುವ ವಕ್ರರೇಖೆಯಾಗಿರುತ್ತದೆ.  ಭೌತಶಾಸ್ತ್ರದ ನಿಯಮಗಳಿಗೆ ಅನುಸಾರವಾಗಿ ವಕ್ರಪಥದಲ್ಲಿ ಚಲಿಸುತ್ತಿರುವ ವಸ್ತುವಿಗೆ ವೇಗೋತ್ಕರ್ಷ ಇರಲೇಬೇಕು. ಈ ವೇಗೋತ್ಕರ್ಷವನ್ನು ಚಿ ಎಂದು ಕರೆದರೆ ಚಿ=4(v siಟಿ ಐ/ಖಿ (v ವಸ್ತುವಿನ ವೇಗ, ಖಿಭೂಮಿಯ  ಆವರ್ತನಾವಧಿ ಮತ್ತು ಐ ಸ್ಥಳದ ಅಕ್ಷಾಂಶ).  ಈ ಸೂತ್ರದಂತೆ ಮೇರುಗಳ ಮೇಲೆ ಅತ್ಯಧಿಕ ಮೌಲ್ಯವುಳ್ಳ ವೇಗೋತ್ಕರ್ಷ ಸಮಭಾಜಕ ವೃತ್ತದ ಬಳಿ ತೀರ ಕಡಿಮೆಯಾಗಿರುತ್ತದೆ.  ರಾಕೆಟ್ ಉತ್ತರ ಮೇರುವಿನಿಂದ ಮೈಸೂರಿಗೆ ಸರಳರೇಖೆಯಲ್ಲಿ ಬರುವಂತಾಗಬೇಕಾದರೆ ಈ ವೇಗೋತ್ಕರ್ಷಕ್ಕೆ ವಿರುದ್ಧ ದಿಕ್ಕಿನಲ್ಲಿ ಬಲವನ್ನೊದಗಿಸಬೇಕು.  ಇದೇ ಕೋರಿಯೋಲಿಸ್ ಬಲ.  ಭೂಮಿಯ ಆವರ್ತನೆಯಿಂದ ಆಗುವ ಕೋರಿಯೋಲಿಸ್ ಪರಿಣಾಮಗಳನ್ನು ಅನೇಕ ಸಂದರ್ಭಗಳಲ್ಲಿ ಕಾಣಬಹುದು.  ಉದಾಹರಣೆಗೆ ಉತ್ತರ ಗೋಲಾರ್ಧದಲ್ಲಿ ಹರಿಯುವ ನದಿಗಳು ತಮ್ಮ ಎಡದಂಡೆಗಿಂತ ಬಲದಂಡೆಯ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತವೆ.  ವಾಯುಮಂಡಲದ ಚಲನದ ಮೇಲೆ ಉಂಟಾಗುವ ಕೋರಿಯೋಲಿಸ್ ಪರಿಣಾಮ ತುಫಾನುಗಳಿಗೆ ಮತ್ತು ವಾಣಿಜ್ಯ ಮಾರುತಗಳಿಗೆ ಕಾರಣವಾಗುತ್ತದೆ.  ಅತಿ ವೇಗದಿಂದ ಚಲಿಸುವ ಆಕಾಶ ನೌಕೆಗಳ ಕಕ್ಷೆಯನ್ನು ನಿರ್ಧರಿಸುವಾಗಲಂತೂ ಈ ಪರಿಣಾಮವನ್ನು ಬಹಳ ಎಚ್ಚರಿಕೆಯಿಂದ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.  ಈ ನೌಕೆಗಳನ್ನು ಕೂಡ ತಮ್ಮ ಅಕ್ಷಗಳ ಸುತ್ತಲೂ  ಆವರ್ತಿಸುತ್ತಿರುವುದರಿಂದ ಅಲ್ಲಿ ಉಂಟಾಗುವ ಕೋರಿಯೋಲಿಸ್ ಪರಿಣಾಮವನ್ನೂ ನಿರ್ಧರಿಸಬೇಕಾಗುತ್ತದೆ. 							 (ಎನ್.ವಿ.ಎಂ.)
ಗಣಿತ ಜಿಜ್ಞಾಸೆ:  S ಎಂಬುದು ಒಂದು ನ್ಯೂಟೋನಿಯನ್ ನಿರ್ದೇಶಕ ಚೌಕಟ್ಟಾಗಿರಲಿ.  ಇದರಲ್ಲಿರುವ ಒಂದು ಬಿಂದು ಔ.      S' ಎಂಬುದು ಔ ವನ್ನು ಕುರಿತು ಸ್ಥಿರ ಕೋನವೇಗ ( ದಿಂದ ಆವರ್ತಿಸುತ್ತಿರುವ ಒಂದು ನಿರ್ದೇಶಕ ಚೌಕಟ್ಟಾಗಿರಲಿ. i, ರಿ ಗಳು S' ನಲ್ಲಿ  ಸ್ಥಿರಗೊಳಿಸಲ್ಪಟ್ಟಿರುವ ಲಂಬ ಏಕಮಾನ ಸದಿಶಗಳಾಗಿರಲಿ.  ಂ                ಒಂದು ಚರ ಕಣ.  S'ನಲ್ಲಿ i ಮತ್ತು ರಿ ಗಳ ದಿಶೆಗಳಲ್ಲಿ ಔxಥಿ ಅಕ್ಷಗಳನ್ನು ತೆಗೆದುಕೊಂಡರೆ ಂ ಯ ಸ್ಥಾನಸದಿಳ
	ಡಿ = xi + ಥಿರಿ

	
ಆದ್ದರಿಂದ S ಗೆ ಸಾಪೇಕ್ಷವಾಗಿ ಂ ಯ ವೇಗ

ಚಿತ್ರ-1

	v = = (-ಥಿ) I + ( + x) ರಿ
ಮತ್ತು ವೇಗೋತ್ಕರ್ಷ
	ಚಿ==(-2-2x) I
	+ (+2-2ಥಿ) ರಿ

ಈಗ I, ರಿ ದಿಶೆಗಳಲ್ಲಿ ನಿಜಬಲದ ಘಟಿಕಗಳು ಅನುಕ್ರಮವಾಗಿ x,ಥಿ ಆಗಿದ್ದರೆ ಚಲನ ಸಮೀಕರಣಗಳು
m (-2-2x) =ಘಿ
m(+2-2ಥಿ) =ಙ
ಆಗುತ್ತದೆ. ಇವನ್ನು ಪುನರಪಿ
            m=ಘಿ +  ಘಿ' + ಘಿ"(
m=ಙ + ಙ' + ಙ" (
ಎಂಬುದಾಗಿ ನಿರೂಪಿಸಬಹುದು.  ಇಲ್ಲಿ
ಘಿ' = 2m,  ಙ' = (2mx,
ಘಿ"= m2x,   ಙ" = m2ಥಿ.

ಚಿತ್ರ-2

ಸಮೀಕರಣಗಳು (1)ನ್ನು ಈಗ ಈ ಪ್ರಕಾರ ಅರ್ಥ ಮಾಡಬಹುದು; ಆವರ್ತಿಸುತ್ತಿರುವ ಒಂದು ಚೌಕಟ್ಟಿಗೆ ಸಾಪೇಕ್ಷವಾಗಿ ಚಲಿಸುತ್ತಿರುವ ಒಂದು ಕಣದ ಮೇಲೆ ವರ್ತಿಸುತ್ತಿರುವ ನಿಜಬಲಕ್ಕೆ ಘಟಕಗಳು (ಘಿ,ಙ), (ಘಿ',ಙ')  ಮತ್ತು (óóಘಿ",ಙ") ಎಂಬ ಎರಡು ಕಾಲ್ಪನಿಕ ಬಲಗಳನ್ನು ಸೇರಿಸಿದರೆ ಆ ಕಣ ನ್ಯೂಟನ್ನನ ಚಲನ ನಿಯಮಾನುಸಾರ ಚಲಿಸುತ್ತದೆ.  ಈ ಕಾಲ್ಪನಿಕ ಬಲಗಳಲ್ಲಿ ಮೊದಲನೆಯದು ಎಂದರೆ (óಘಿ',ಙ') ಕೋರಿಯೋಲಿಸ್ ಬಲದ ಘಟಕಗಳು.  ಈ ಬಲದ ಪರಿಮಾಣ S' ನ ಕೋನವೇಗ ಮತ್ತು S'ಗೆ ಸಾಪೇಕ್ಷವಾಗಿ ಕಣದ ಚಲನದರ v' ಇವುಗಳ ಅನುಪಾತದಲ್ಲಿದೆ.  ಅದರ ದಿಶೆ S' ಗೆ ಸಾಪೇಕ್ಷವಾದ ವೇಗ v' ಗೆ ಲಂಬವಾಗಿದೆ.  ಇದನ್ನು v' ನ ದಿಶೆಯಿಂದ, ಕೋನವೇಗದ ದಿಶೆಗೆ ವಿರುದ್ಧ ದಿಶೆಯಲ್ಲಿ ಒಂದು ಲಂಬಕೋನದಷ್ಟು ಆವರ್ತಿಸುವುದರ ಮೂಲಕ ಪಡೆಯುತ್ತೇವೆ.  ಮೇಲೆ ಬರೆದಿರುವ ಕಾಲ್ಪನಿಕ ಬಲಗಳಲ್ಲಿ ಎರಡನೆಯದು ಎಂದರೆ (ಘಿ",ಙ") ಕೇಂದ್ರಾಪಗಮನ ಬಲದ ಘಟಕಗಳು.  ಈ ಬಲದ ಪರಿಮಾಣ S'  ಕೋನವೇಗದ ವರ್ಗ ಮತ್ತು ಆವರ್ತನ ಕೇಂದ್ರದಿಂದ ಕಣದ ದೂರ ಇವುಗಳ ಅನುಪಾತದಲ್ಲಿದೆ.  ಇದು ಆವರ್ತನ ಕೇಂದ್ರದಿಂದ ಆರೀಯವಾಗಿ ಹೊರಭಾಗಕ್ಕೆ ನಿರ್ದೇಶಿತವಾಗಿದೆ.	    *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ